ವೈಫಲ್ಯ ಎದುರಿಸುವ ಮನೋಭಾವವಿರಲಿ
ವೈಫಲ್ಯ ಎದುರಿಸುವ ಮನೋಭಾವವಿರಲಿ ಮಕಳು ಯಾವುದೇ ವಯೋಮಾನವಿರಲಿ ತಾಯಿಗೆ ಮಮಕಾರ, ಮೊದಲ ಬಾರಿ ತನ್ನ ಮಡಿಲಿಗೆ ಮಗು ಬಂದಿದ್ದ ಆಕೆ ಎಲ್ಲಾ ಹಂತದಲ್ಲಿ ಮಗುವಿನ ಹೊಣೆ ಹೊರುತ್ತಾಳೆ. ಮಗುವಿನ ಆಟ ಪಾಠ ನೋಡಿ ಖುಷಿ ಪಡುವ ಪೋಕರಿಗೆ ಮಗು ಬೆಳೆದ ಹಾಗೆಯೇ ನಿಧಾನವಾಗಿ ಆತಂಕ ಶುರುವಾಗುತ್ತದೆ. ಮನೆಯಲ್ಲಿ ಸಹಜವಾಗಿ ಅಮ್ಮನ ಮಡಿಲಲ್ಲಿ ಅಜ್ಜನ ಅಪ್ಪುಗೆಯಲ್ಲಿ ಅಕ್ಕನ ಮಮತೆಯಲ್ಲಿ ಮಿಂದೇಳುವ ಮಕ್ಕಳಿಗೆ ಹೊರಗಿನವರ ಸಣ್ಣ ನಿರ್ಲಕ್ಷವೂ ಅರಗಿಸಲು ಆಗದು. ಬೇರೆಯವರ ಜೊತೆ ಹೊಂದಾಣಿಕೆಯ ಸಮಸ್ಯೆ, ಅಂತು ಬೆರೆಯುವುದರ ಸಮಸ್ಯೆಯಂಥ ಚಿಕ್ಕ ಪುಟ್ಟ ಸಮಸ್ಯೆ ಎದುರಿಸುವ ಮಕ್ಕಳು ತಡವರಿಸುತ್ತಾರೆ. ಆಟದ ಸಣ್ಣ ಸೋಲಿಗೂ ತೀರಾ ಕುಗ್ಗುತ್ತಾರೆ. ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಎಲ್ಲ ರಂಗದಲ್ಲೂ ಮುಂದಿರ ಬೇಕು ಎಂಬ ತುಡಿತ ಪೋಷಕರಲ್ಲಿ ಸಹಜವೇ ಆದರೆ, ಅದಕ್ಕೆ ತಕ್ಕ ವಾತಾವರಣ, ತಯಾರಿ, ಮನಸ್ಥಿತಿ ಇದೆಯೇ ಎಂಬುದೇ ಮುಖ್ಯ ವಿಚಾರ. ಪೋಷಕರಿಗೆ ಸಲಹೆ *ಈ ಪೋಷಕರು ಸದಾ ಕಾಲ ಮಕ್ಕಳ ಜತೆಯಲ್ಲಿಯೇ ಇರಲು ಆಗದು, ಹಾಗಾಗಿ ಮಕ್ಕಳಿಂದ ತುಸು ಮಾನಸಿಕವಾಗಿ ಅಂತರ ಗತ್ಯ. ಇಲ್ಲವಾದಲ್ಲಿ ಮಕ್ಕಳು ಎಲ್ಲದಕ್ಕೂ ಪೋಷಕರ ಮೇಲೆ ಅವಲಂಬಿತರಾಗುತ್ತಾರೆ. * ಈ ಮಕ್ಕಳ ಯಾವುದೇ ಕೆಲಸ, ಕಾರ್ಯದ ಮೇಲೆ ಅತಿಯಾಗಿ ನಿರೀಕ್ಷೆ ಇಡಬಾರದು, ಅತಿ ನಿರೀಕ್ಷೆ ಸಹಜವಾಗಿ ಒತ್ತಡ ತರುತ್ತದೆ. ನಿರೀಕ್ಷೆ ಹುಸಿಯಾದರೆ ನಿರಾಸೆ ಆಗುತ್ತದೆ. ಇದರಿಂದ ಮಕ್ಕಳಲ್ಲಿ ಆತ್ಮ ವಿಶ್ವಾಸ ಕುಂದಬಹುದು. * ಉತ್ತಮ ಕೆಲಸಕ್...