Posts

Showing posts from January, 2023

ಒಳ್ಳೆಯ ಕಲ್ಪನಾಶಕ್ತಿ ಮತ್ತು ದೂರದರ್ಶಿತ್ವವನ್ನು ರೂಢಿಸಿಕೊಳ್ಳಿ

  ಒಳ್ಳೆಯ ಕಲ್ಪನಾಶಕ್ತಿ ಮತ್ತು ದೂರದರ್ಶಿತ್ವವನ್ನು ರೂಢಿಸಿಕೊಳ್ಳಿ   ದೇವರು ಮನುಷ್ಯರಿಗೆ ಅದ್ಭುತ ಕಲ್ಪನಾಶಕ್ತಿಯನ್ನು ಕೊಟ್ಟಿದ್ದಾನೆ. ನಮ್ಮ ವೈಯಕ್ತಿಕ ಆಶೆ ಆಕಾಂಕ್ಷೆಗಳು ನಮ್ಮ ಅಂತರಂಗದಲ್ಲಿ ಹುದುಗಿದ್ದು, ನಾವು ಅವುಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತೇವೆ. ಇದನ್ನು ಕನಸು ಎಂದು ಬೇಕಾದರೂ ಕರೆಯಬಹುದು. (ನಿದ್ರೆಯಲ್ಲಿ ತನ್ನಷ್ಟಕ್ಕೆ ತಾನೇ ಬರುವ ಕನಸಲ್ಲ). ನಮ್ಮ ಜೀವನದಲ್ಲಿ ಸಂಭವಿಸುವ ವಿದ್ಯಮಾನಗಳೆಲ್ಲ ಇಂತಹ ಕಲ್ಪನೆಗಳ ಫಲವೆಂದರೆ ತಪ್ಪಾಗುವುದಿಲ್ಲ. ಪ್ರಪಂಚದ ಖ್ಯಾತ ವಿಜ್ಞಾನಿಗಳು ಸಾಹಿತಿಗಳು ಇವರೆಲ್ಲ ಅದ್ಭುತ ಕನಸುಗಾರರೆ ಆಗಿದ್ದಾರೆ. ಕಂಡರಿಯದ ಕೇಳರಿಯದ ವಿಮಾನದ ಬಗ್ಗೆ ಕನಸು ಕಂಡ ರೈಟ್ ಸಹೋದರರು ವಿಮಾನದ ಆವಿಷ್ಕಾರಕ್ಕೆ ಕಾರಣಕರ್ತರಾದರು. ಈ ಎಲ್ಲಾ ಕನಸುಗಾರರೂ ಆಶಾವಾದಿಗಳೂ ಸಕಾರಾತ್ಮಕವಾಗಿ ಆಲೋಚಿಸುವವರೆ ಆಗಿದ್ದಾರೆ. ಯಾವಾಗಲೂ ಪರೀಕ್ಷೆಯ ಬಗ್ಗೆ ಆಲೋಚಿಸುತ್ತ ಉತ್ತಮ ಫಲಿತಾಂಶದ ಕಲ್ಪನೆಯಲ್ಲಿ ತೊಡಗಿರುವ ವಿದ್ಯಾರ್ಥಿ ಆ ದಿಶೆಯಲ್ಲಿ ಸಫಲನಾಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಕಲ್ಪನೆಗಳೂ ಸಾಕಾರವಾಗುವುದಕ್ಕೆ ಕಾರಣವೇನು? ಇದಕ್ಕೆ ಕಾರಣವೇನೆಂದರೆ, ನಾವು ಕಲ್ಪಿಸಿದ ವಿಷಯವನ್ನೇ ಮನನ ಮಾಡುತ್ತಿದ್ದರೆ ಆ ದಿಶೆಯಲ್ಲಿ ಪ್ರಯತ್ನ ಪಡುವ ಸ್ಫೂರ್ತಿ ಸಿಗುತ್ತದೆ. ಪ್ರಯತ್ನಕ್ಕೂ ಯಶಸ್ಸಿಗೂ ಇರುವ ನಂಟು ಎಲ್ಲರಿಗೂ ಗೊತ್ತಿರುವ ವಿಷಯ. ಮನೆಯ ಬಗ್ಗೆಯೇ ಕನಸು ಕಟ್ಟುವವರು ಅದನ್ನು ಹೊಂದೇ ತೀರುತ್ತಾರೆ. ಹೀ...