Posts

Showing posts from October, 2023

ಅತಿಕಾಳಜಿ ಮಕ್ಕಳ ಬೆಳವಣಿಗೆಗೆ ತಡೆಗೋಡೆಯಾದೀತು ?

  ಅತಿಕಾಳಜಿ ಮಕ್ಕಳ ಬೆಳವಣಿಗೆಗೆ ತಡೆಗೋಡೆಯಾದೀತು   ಮಕ್ಕಳಿಗೆ ದೊಡ್ಡವರು ಸೈಕಲ್ ಕಲಿಸುವಾಗ , ಮೊದಲು ಹ್ಯಾಂಡಲ್ ಹಿಡಿದುಕೊಂಡು ಎಚ್ಚರಿಕೆಯಿಂದ ಓಡಿಸಲು ಕಲಿಸುತ್ತಾರೆ , ನಂತರ ಕೈ ಬಿಡುತ್ತಾರೆ . ಅಂತೆಯೇ , ನಡೆಯುವ ಮಕ್ಕಳು ಕೆಳಗೆ ಬೀಳಲು ಬಿಡಬೇಕು . ಆಗ ಕೆಳಗೆ ಬೀಳುವುದು ಅವರಿಗೆ ಅಭ್ಯಾಸವಾಗುತ್ತದೆ . ದೊಡ್ಡವರು ರಕ್ಷಣೆಯಾಗಿ ನಿಂತಿರಬೇಕೇ ವಿನಾ , ನಡೆಯುವುದನ್ನು ಕಲಿಸದೆ ಬಿಡಬಾರದು . ಕಳೆದ ಕಂತಿನಲ್ಲಿ , ಪೇರೆಂಟಿಂಗ್ ​ ನ ಮಿಕ್ಕ ವಿಧಗಳ ಕುರಿತು ತಿಳಿದುಕೊಂಡಿದ್ದರ ಜತೆಗೆ , ಸೋಲನ್ನು ಹೇಗೆ ಎದುರಿಸಬೇಕೆಂಬುದನ್ನು ಮಕ್ಕಳಿಗೆ ಹೆತ್ತವರು ಕಲಿಸಬೇಕಾದ ಅಗತ್ಯದ ಕುರಿತು ರ್ಚಚಿಸಿದೆವು . ಈ ನಿಟ್ಟಿನಲ್ಲಿ ಮತ್ತಷ್ಟು ಹೊಳಹುಗಳನ್ನು ನೋಡೋಣ . ಕೆಲ ತಂದೆ - ತಾಯಿಯರು ‘ ಅಜ್ಜ - ಅಜ್ಜಿ ’ ಎನಿಸಿಕೊಂಡ ಮೇಲೆ ‘ ಮಕ್ಕಳ ಮಕ್ಕಳನ್ನೂ ’ ಬಿಡುವುದಿಲ್ಲ ; ಅವರ ರಕ್ಷಣೆಯೂ ತಮ್ಮದೇ ಹೊಣೆ ಎಂದುಕೊಳ್ಳುತ್ತಾರೆ . ತಮ್ಮ ಅಭಿಪ್ರಾಯ ಮತ್ತು ನಂಬಿಕೆಗಳನ್ನು ಮೊಮ್ಮಕ್ಕಳ ತಲೆಮೇಲೆ ರುಬ್ಬುತ್ತಾರೆ . ತಮ್ಮ ಮೂಢ - ಮೂರ್ಖ ನಂಬಿಕೆಗಳಿಂದ ಅವರನ್ನು ವಿಚಾರರಹಿತ ಕೂಪದೊಳಗೆ ಎಳೆಯುತ್ತಾರೆ . ಮಗ / ಮಗಳು ಅಡ್ಡಿಪಡಿಸಿದರೆ , ‘ ನಿನಗೇನು ತಿಳಿಯುತ್ತದೆ ? ನಿನ್ನನ್ನು ನಾವು ಹೀಗೇ ಬೆಳೆಸಿದೆವೇನು ?’ ಎಂದು ಗದರಿಸುತ್ತಾರೆ . ಮಕ್ಕಳನ್ನು ಹೇಗೆ ...