ವೈಫಲ್ಯ ಎದುರಿಸುವ ಮನೋಭಾವವಿರಲಿ
ವೈಫಲ್ಯ ಎದುರಿಸುವ ಮನೋಭಾವವಿರಲಿ
ಮಕಳು ಯಾವುದೇ ವಯೋಮಾನವಿರಲಿ ತಾಯಿಗೆ ಮಮಕಾರ, ಮೊದಲ ಬಾರಿ ತನ್ನ ಮಡಿಲಿಗೆ ಮಗು ಬಂದಿದ್ದ ಆಕೆ ಎಲ್ಲಾ ಹಂತದಲ್ಲಿ ಮಗುವಿನ ಹೊಣೆ ಹೊರುತ್ತಾಳೆ. ಮಗುವಿನ ಆಟ ಪಾಠ ನೋಡಿ ಖುಷಿ ಪಡುವ ಪೋಕರಿಗೆ ಮಗು ಬೆಳೆದ ಹಾಗೆಯೇ ನಿಧಾನವಾಗಿ ಆತಂಕ ಶುರುವಾಗುತ್ತದೆ.
ಮನೆಯಲ್ಲಿ ಸಹಜವಾಗಿ ಅಮ್ಮನ ಮಡಿಲಲ್ಲಿ ಅಜ್ಜನ ಅಪ್ಪುಗೆಯಲ್ಲಿ ಅಕ್ಕನ ಮಮತೆಯಲ್ಲಿ ಮಿಂದೇಳುವ ಮಕ್ಕಳಿಗೆ ಹೊರಗಿನವರ ಸಣ್ಣ ನಿರ್ಲಕ್ಷವೂ ಅರಗಿಸಲು ಆಗದು. ಬೇರೆಯವರ ಜೊತೆ ಹೊಂದಾಣಿಕೆಯ ಸಮಸ್ಯೆ, ಅಂತು ಬೆರೆಯುವುದರ ಸಮಸ್ಯೆಯಂಥ ಚಿಕ್ಕ ಪುಟ್ಟ ಸಮಸ್ಯೆ ಎದುರಿಸುವ ಮಕ್ಕಳು ತಡವರಿಸುತ್ತಾರೆ. ಆಟದ ಸಣ್ಣ ಸೋಲಿಗೂ ತೀರಾ ಕುಗ್ಗುತ್ತಾರೆ. ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಎಲ್ಲ ರಂಗದಲ್ಲೂ ಮುಂದಿರ ಬೇಕು ಎಂಬ ತುಡಿತ ಪೋಷಕರಲ್ಲಿ ಸಹಜವೇ ಆದರೆ, ಅದಕ್ಕೆ ತಕ್ಕ ವಾತಾವರಣ, ತಯಾರಿ, ಮನಸ್ಥಿತಿ ಇದೆಯೇ ಎಂಬುದೇ ಮುಖ್ಯ ವಿಚಾರ.
ಪೋಷಕರಿಗೆ ಸಲಹೆ
*ಈ ಪೋಷಕರು ಸದಾ ಕಾಲ ಮಕ್ಕಳ ಜತೆಯಲ್ಲಿಯೇ ಇರಲು ಆಗದು, ಹಾಗಾಗಿ ಮಕ್ಕಳಿಂದ ತುಸು ಮಾನಸಿಕವಾಗಿ ಅಂತರ ಗತ್ಯ. ಇಲ್ಲವಾದಲ್ಲಿ ಮಕ್ಕಳು ಎಲ್ಲದಕ್ಕೂ ಪೋಷಕರ ಮೇಲೆ ಅವಲಂಬಿತರಾಗುತ್ತಾರೆ.
* ಈ ಮಕ್ಕಳ ಯಾವುದೇ ಕೆಲಸ, ಕಾರ್ಯದ ಮೇಲೆ ಅತಿಯಾಗಿ ನಿರೀಕ್ಷೆ ಇಡಬಾರದು, ಅತಿ ನಿರೀಕ್ಷೆ ಸಹಜವಾಗಿ ಒತ್ತಡ ತರುತ್ತದೆ. ನಿರೀಕ್ಷೆ ಹುಸಿಯಾದರೆ ನಿರಾಸೆ ಆಗುತ್ತದೆ. ಇದರಿಂದ ಮಕ್ಕಳಲ್ಲಿ ಆತ್ಮ ವಿಶ್ವಾಸ ಕುಂದಬಹುದು.
* ಉತ್ತಮ ಕೆಲಸಕ್ಕೆ ಹೊಗಳಿದಂತೆಯೇ ವಿಫಲರಾದಾಗಲೂ ಅದರ ಹಿಂದಿನ ಕಾರಣ, ಹೀಗೆ ಮಾಡಿದರೆ ಸು ಆಗಿರುತ್ತಿತ್ತು ಎಂಬುದನ್ನು ವಿಶ್ವೇಪಿಸಿ, ತಿಳಿಸಿಕೊಡಿ,
* ಯಾವುದಾದರೂ ಕೆಲಸದಲ್ಲಿ ಮಕ್ಕಳು ವಿಫಲರಾದರೆ ತಬ್ಬಸಂತೈಸಿ, ಸಣ್ಣ ಅಪ್ಪುಗೆ ಮಕ್ಕಳಲ್ಲಿ ಮತ್ತೆ ವಿಶ್ವಾಸ ತುಂಬಬಲ್ಲದು. ಬಿದ್ದಾಗಲೂ ಕೈ ಹಿಡಿದು ನಡೆಸುವ ಪೋಷಕರು ಇದ್ದಾರೆ ಎಂಬ ಭರವಸೆಯೇ ಬಹುಮಾನಕ್ಕಿಂತ ದೊಡ್ಡದು.
* ಈ ಮಕ್ಕಳ ಬಯಕೆ, ಆಸೆಗಳನ್ನು ಪೂರೈಸಲು ಕೆಲವೊಮ್ಮೆ ಬೇಕೆಂದೇ ಏಳಂಬ ಮಾಡಿ, ಇದರಿಂದ ತಾನು ಪ ಪಟ್ಟಿದ್ದೆಲ್ಲ ಸುಲಭವಾಗಿ ದಕ್ಕದು ಎಂಬ ಭಾವ ಬೆಳೆದು ಇಂಥದ್ದೇ ಸನ್ನಿವೇಶ ಬಂದರೆ ಸಮರ್ಪಕವಾಗಿ ನಿಭಾಯಿಸುತ್ತಾರೆ.
ಚಿಣ್ಣರಿಗಿಷ್ಟು ಸಲಹೆ
* ಚಿಕ್ಕವರಿರಲಿ ಅಥವಾ ತುಸು ದೊಡ್ಡ ಮಕ್ಕಳೇ ಇರಲಿ, ಕೆಲವು ಆಸೆ ಆಕಾಂಕ್ಷೆ ಸದ ಬೇರೆಯವರನ್ನು ನೋಡಿ ತನಗೂ ಬೇಕು ಎಂಬ ಭಾವ ಸಹಜ. ಆದರೆ ಬದುಕಿನಲ್ಲಿ ಎಲ್ಲವೂ ಎಲ್ಲರಿಗೂ ಸಿಗದು.
*ನಿರಾಸೆ , ವೈಫಲ್ಯ ಎಂದರೆ ನಮ್ಮ ದೌರ್ಬಲ್ಯವಲ್ಲ. ಕೆಲವು ಸಂದರ್ಭಗಳಲ್ಲಿ ಗೆಲುವು ಸಾಧ್ಯವಾಗದೆ ಇರಬಹುದು. ಸೋಲಿಗೆ ಕಾರಣ ಕಂಡು ಕೊಂಡು ಮತ್ತೆ ಗೆಲುವಿಗೆ ಪ್ರಯತ್ನಿಸಿ.
* ಎಷ್ಟೋ ವೇಳೆ ಸೋಡಾಗಲೇ ನಮ್ಮ ಸಾಮರ್ಥ್ಯ ಅರಿವಾಗುತ್ತದೆ. ಸಾಮರ್ಥ್ಯ, ಅಷ್ಟವಿಲ್ಲದಿದ್ದರೆ ಬೇರೆ ವಿಚಾರಗಳಲ್ಲಿ ಮುಂದುವರಿಯುವುದು
* ಕೆಲವೊಂದು ಸೋಲು, ನಿರಾಸೆಗಳು ಹೊಸ ಹೊಸ ಅವಕಾಶಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಎಂಬುದನ್ನು ಆರಿಸಿರಿ,
ಸಣ್ಣಸಣ್ಣ ಸಕಾರಾತ್ಮಕ ಭಾವಗಳ ಒಗ್ಗೂಡಿಗೆ ಮೂಲಕವೇ ಗಟ್ಟಿಯಾದ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳ ದೈಹಿಕ ಬೆಳವಣಿಗೆಗೆ ಕಾಳಜಿ ವಹಿಸಿದ ರೀತಿಯಲ್ಲಿಯೇ ಮಾನಸಿಕ ಬೆಳವಣಿಗೆಗೆ ಒತ್ತು ನೀಡಿ ಗಾಳಿ ತುಂಬಿದ ಬಲೂನ್ ಒಮ್ಮೆಲೇ ಒಂದು ನಿರ್ವಾತ ಉಂಟಾಗುವ ರೀತಿ ಮಾಡದೇ ಸಹಜವಾಗಿ ಬದುಕಿನಲ್ಲಿ ಹೆಜ್ಜೆ ಹಾಕುವಂತೆ, ಮಕ್ಕಳನ್ನು ತಯಾರಿ ಮಾಡುವ ಜವಾಬ್ದಾರಿ ಪೋಷಕರದ್ದು
Comments
Post a Comment