Posts

Showing posts from September, 2022

ಕೈ ಸ್ವಚ್ಛವಾಗಿಟ್ಟುಕೊಳ್ಳೋಣ

ಕೈ ಸ್ವಚ್ಛವಾಗಿಟ್ಟುಕೊಳ್ಳೋಣ ಅದೊಂದು ಪುಟ್ಟದೇಶ, ಯಾರೇ ತಪ್ಪು ಮಾಡಿದರೂ ಆ ದೇಶದ ರಾಜ ಕಠಿಣ ಶಿಕ್ಷೆಗೆ ಗುರಿಪಡಿಸುತ್ತಿದ್ದ. ಒಮ್ಮೆ ಆ ದೇಶದಲ್ಲಿ ಒಂದು ಮನೆ ಕಳ್ಳತನವಾಯಿತು. ಕೆಲವೇ ದಿನಗಳಲ್ಲಿ ರಾಜಭಟರು ಕಳ್ಳತನ ಮಾಡಿದ ವ್ಯಕ್ತಿಯನ್ನು ಬಂಧಿಸಿ ರಾಜನ ಬಳಿಗೆ ತಂದರು. 'ಈತ ಈ ರಾತ್ರಿ ಜೈಲಿನಲ್ಲಿರಲಿ, ನಾಳೆ ಬೆಳಗ್ಗೆ 7 ಗಂಟೆಗೆ ಗಲ್ಲುಗಂಬಕ್ಕೆ ಏರಿಸಿ' ಎಂದು ರಾಜ ಆಜ್ಞೆ ಮಾಡಿದ. ಗಾಬರಿಗೊಂಡ ಆ ಕಳ್ಳ ದುಃ ಖಿಸುತ್ತಿರುವಾಗ ಮಂತ್ರಿ ಬಂದು ವಿಚಾರಿಸಿದ. ನನ್ನ ಹತ್ತಿರ ಕಬ್ಬಿಣವನ್ನು ಬಂಗಾರ ಮಾಡುವ ವಿದ್ಯೆ ಇದೆ. ನಾನು ಗಲ್ಲಿಗೆ ಏರುವಂತಾದರೆ ನಾನು ಈ ದೇಶ ಹಾಗೂ ಸಮಾಜಕ್ಕೆ ಅನ್ಯಾಯ ಮಾಡಿದಂತಾಗುತ್ತದೆ' ಎಂದು ಕಳ್ಳ ಅಳಲು ತೋಡಿಕೊಂಡ. ಮಂತ್ರಿಯು ರಾಜನಿಗೆ ಈ ವಿಷಯ ತಿಳಿಸಿದ. ರಾಜ ಗಲ್ಲು ಶಿಕ್ಷೆ ತಡೆಹಿಡಿದ. ದೇಶದ ಎಲ್ಲ ಜನರು ತಮ್ಮ ಮನೆಯಲ್ಲಿರುವ ಕಬ್ಬಿಣವನ್ನು ರಾಜಧಾನಿಗೆ ತೆಗೆದುಕೊಂಡು ಬಂದು ಬಂಗಾರ ಮಾಡಿಕೊಂಡು ಹೋಗಬೇಕೆಂದು ಡಂಗುರ ಸಾರಿದ, ಜನರು ಕಬ್ಬಿಣವನ್ನು ಅರಮನೆ ಮೈದಾನದಲ್ಲಿ ಸಂಗ್ರಹಿಸಿದರು. ನಂತರ ರಾಜ ಹಾಗೂ ಮಂತ್ರಿಗಳು ಕಳ್ಳನನ್ನು ಕಬ್ಬಿಣದ ರಾಶಿ ಹತ್ತಿರ ಕರೆದುಕೊಂಡು ಹೋಗಿ, ಇದನ್ನು ಬಂಗಾರ ಮಾಡು ಎಂದರು. ಕೆಲವು ಕ್ಷಣ ಯೋಚಿಸಿದ ಕಳ್ಳ, 'ಮಹಾರಾಜರೇ ನನ್ನ ಬಳಿ ಒಂದು ಚಿಕ್ಕ ಹಣ್ಣು ಇದೆ. ಈ ಹಣ್ಣಿನ ರಸವನ್ನು ಕೈಯಿಂದ ಹಿಸುಕಿ ಕಬ್ಬಿಣದ ಮೇಲೆ ಸಿಂಪಡಿಸಿದರೆ ಅದು ಬಂಗಾರವಾಗುತ್ತದೆ. ಆದರೆ, ಈ ಹಣ್ಣು...

ಸಜ್ಜನಿಕೆಯನ್ನು ಗುರುತಿಸೋಣ

ಹಿರಿಯರೊಬ್ಬರು ಹೇಳಿದ ಘಟನೆ.ಆ ಊರಿನಲ್ಲಿ ಹಣ್ಣಿನ ಅಂಗಡಿಯೊಂದಿತ್ತು. ಅಂಗಡಿಯ ಮಾಲೀಕ ವ್ಯಾಪಾರಕ್ಕೆ ಕೂರುತ್ತಿರಲಿಲ್ಲ. ಅದೊಮ್ಮೆ, ಹಣ್ಣು ಕೊಳ್ಳಲು ಬಂದ ಗೃಹಸ್ಥರೊಬ್ಬರು ಅಲ್ಲಿ ಹಣ್ಣು ಕೊಡುವವರೇ ಇಲ್ಲದ್ದನ್ನು ಗಮನಿಸಿ, ಅಂಗಡಿಯನ್ನೊಮ್ಮೆ ಕಣ್ಣಾಯಿಸಿದರು. ಅಲ್ಲೊಂದು ಬೋರ್ಡಿನ ಮೇಲೆ - 'ನನ್ನ ತಾಯಿಗೆ ಇನ್ನಿಲ್ಲದ ಕಾಯಿಲೆ. ಆಕೆಯ ಅಂತಿಮ ದಿನದಲ್ಲಿ ಜೊತೆಯಲ್ಲೇ ಇದ್ದುಕೊಂಡು ಸೇವೆ ಮಾಡಬೇಕಿದೆ. ತಪ್ಪು ಭಾವಿಸದೇ ನಿಮಗ್ಯಾವ ಹಣ್ಣುಗಳು ಬೇಕೋ ಅವುಗಳ ತೂಕ ಮಾಡಿ ಪಟ್ಟಿಯಲ್ಲಿರುವ ದರದಂತೆ ದಯಮಾಡಿ ಹಣವನ್ನು ಗಲ್ಲಾಪೆಟ್ಟಿಗೆಯಲ್ಲಿ ಹಾಕಿ' ಎನ್ನುವ ವಿನಂತಿ ಇತ್ತು. ಆ ಗೃಹಸ್ಥರು ವ್ಯಂಗ್ಯದ ನಗೆ ನಕ್ಕು, 'ಗಿರಾಕಿಗಳು ಸರಿಯಾದ ಮೊತ್ತವನ್ನು ಹಾಕಿ ಹಣ್ಣನ್ನು ಕೊಂಡೊಯ್ಯುವ ಸಂದರ್ಭ ಉಂಟಾ? ಈತ ಆದಷ್ಟು ಬೇಗ ಅಂಗಡಿ ಮುಚ್ಚುವುದು ಗ್ಯಾರಂಟಿ. ಹೇಗೂ ಸಂಜೆ ಬಾಗಿಲು ಹಾಕಲು ಬರುತ್ತಾನೆ. ಅವನಿಗೆ ತಿಳಿಹೇಳಬೇಕು' ಎಂದುಕೊಂಡು, ಹಿಂದಿರುಗಿದರು. ಆ ರಾತ್ರಿ ಆ ಗೃಹಸ್ಥರು ಬಂದು, ಬಾಗಿಲು ತೆರೆದೇ ಹೋಗುವ ಆತನ ಅವಿವೇಕಿತನಕ್ಕೆ ಬುದ್ಧಿಹೇಳಲು ಹೊರಟಾಗ ಅಂಗಡಿ ಮಾಲೀಕ ಹೇಳಿದ- 'ನಾನೂ ಮೊದಲು ನಿಮ್ಮಂತೆ ಯೋಚಿಸಿ ತಾಯಿಯೊಡನೆ ಹಾಗೆ ಮಾಡಲಾಗದು ಎಂದೆ. ಆಗ ಆಕೆ 'ಮಗು ನಾನು ಅಂತಿಮ ದಿನಗಳನ್ನು ಎಣಿಸುತ್ತಿರುವೆ. ನಾನು ಕಣ್ಣುಮುಚ್ಚುವಾಗ ನನ್ನೊಂದಿಗೆ ನೀನಿರಬೇಕು. ಅಂಗಡಿಯ ಚಿಂತೆ ಬಿಡು, ನಾನು ಆ ಭಗವಂತನಲ್ಲಿ ಪ್ರಾರ್ಥಿಸುವೆ. ನ...

ಭರವಸೆಯ ಬದುಕು...

ಭರವಸೆಯ ಬದುಕು... ಶಾಲಾ ಶಿಕ್ಷಕರೊಬ್ಬರಿಗೆ ಪ್ರತಿದಿನವೂ ಬರೆಯುವ ಮೊದಲ ದಿನಚರಿ ಅಭ್ಯಾಸವಿತ್ತು. ಅದು ಹೊಸವರ್ಷದ ದಿನ. ಹಿಂದಿನ ದಿನವಷ್ಟೆ ವೃತ್ತಿಯಿಂದ ನಿವೃತ್ತಿ ಹೊಂದಿದ್ದರು. ಅವರು ಹೀಗಾಗಿ, ಏನನ್ನೂ ಕಳಕೊಂಡವರಂತೆ ಮನೆಯ ಕೋಣೆಯಲ್ಲಿ ಬೇಸರದಲ್ಲಿ ಕುಳಿತಿದ್ದರು. ಹಾಗೆಯೆ ಒಂದು ಹಾಳೆಯ ಮೇಲೆ ಬರೆಯಲಾರಂಭಿಸಿದರು- 'ಕಳೆದ ವರ್ಷ ನನ್ನ ಪಾಲಿಗೆ ಕೆಟ್ಟವರ್ಷವೆಂದೇ ಹೇಳಬೇಕು. ಕಾರಣ, ಈ ಅವಧಿಯಲ್ಲಿ ನನಗೆ ಶಸ್ತ್ರಚಿಕಿತ್ಸೆಯಾಗಿ ಜಠರದಲ್ಲಿದ್ದ ಹುಣ್ಣನ್ನು ತೆಗೆದರು. ಈ ಶಸ್ತ್ರಚಿಕಿತ್ಸೆಯಿಂದಾಗಿ ನಾನು ಬಹಳ ದಿನ ಹಾಸಿಗೆಯಲ್ಲಿ ಇರುವಂತಾಯಿತು. 95 ವರ್ಷ ವಯಸ್ಸಿನ ನನ್ನ ತಂದೆ ನಿಧನರಾಗಿದ್ದೂ ಕಳೆದ ವರ್ಷವೇ. ಅಪ್ಪ ನಿಧನರಾದ ಕೆಲವೇ ದಿನಗಳಲ್ಲಿ ನಮ್ಮಮ್ಮ ಕೂಡ ತೀರಿಕೊಂಡರು. ಈ ಮಧ್ಯೆ ಬೈಕ್‌ ಸವಾರಿ ಮಾಡುತ್ತಿದ್ದ ನನ್ನ ಮಗನಿಗೆ ಅಪಘಾತವಾಗಿ, ಆತ ವಾರ್ಷಿಕ ಪರೀಕ್ಷೆಯನ್ನು ತಪ್ಪಿಸಿಕೊಳ್ಳುವಂತಾಯಿತು. ಸಾಲದ್ದಕ್ಕೆ ನನಗೆ ಕೆಲಸದಿಂದ ನಿವೃತ್ತಿಯೂ ಆಯಿತು. ಒಟ್ಟಿನಲ್ಲಿ, ಕಳೆದ ವರ್ಷವಿಡೀ ನನ್ನ ಪಾಲಿಗೆ ಕೆಟ್ಟದಾಗಿತ್ತು.' ಪತಿ ಹೀಗೆ ಚಿಂತಾಕಾಂತರಾಗಿರುವುದು ಪತ್ನಿಗೆ ಗೋಚರಿಸಿತು. ಇವರೇನು ಮಾಡುತ್ತಿರ ಬಹುದು ಎಂದುಕೊಂಡು ಸದ್ದಿಲ್ಲದೆ ಪತಿಯ ಕೋಣಿ ಪ್ರವೇಶಿಸಿದ ಆಕೆ, ಹಾಳೆಯ ಮೆಲೆ ಬರೆದಿಟ್ಟಿದ್ದನ್ನು ಓದಿಕೊಂಡರು. ಜತೆಗೆ ಇನ್ನೊಂದು ಹಾಳೆಯಲ್ಲಿ ಒಂದಿಷ್ಟು ಬರೆದು ಸದ್ದಿಲ್ಲದೆ ಅಡುಗೆಮನೆಗೆ ತೆರಳಿದರು. ಹಾಳೆಯಲ್ಲಿ ಪತ್ನಿ ಬರೆದ...

ಗುರಿ ತಲುಪುವ ಬಗೆ

ಗುರಿ ತಲುಪುವ ಬಗೆ... ಸ್ಪೇನ್‌ನ ಬುರ್ಲಾಡಾ ಶಹರದಲ್ಲಿ 2012 ನೇ ಇಸ್ವಿಯ ಡಿಸೆಂಬರ್ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಮುಂಚೆ ಲಂಡನ್ ಒಲಿಂಪಿಕ್ಸ್‌ನಲ್ಲಿ 3000 ಮೀಟರ್ ಸ್ಪರ್ಧೆಯಲ್ಲಿ ಪದಕ ಗಳಿಸಿದ ಪೂರ್ವ ಆಫ್ರಿಕಾದ ಕೀನ್ಯಾ ದೇಶದ ಜಗತ್ವಸಿದ್ಧ ಓಟಗಾರ ಅಬೆಲ್ ಮಥಾಯಿ ಆರಂಭದಿಂದಲೂ ಎಲ್ಲರಿಗಿಂತ ಸಾಕಷ್ಟು ಮುಂದೆ ಇದ್ದು ಸ್ವರ್ಣ ಪದಕ ತನ್ನದಾಗಿಸುವುದರಲ್ಲಿ ಯಾವ ಸಂಶಯವೂ ಇರಲಿಲ್ಲ. ಆದರೆ ಕೊನೆಯ ಹಂತದಲ್ಲಿ ಅವರ ಮನಸ್ಸಿನಲ್ಲಿ ಏನೋ ಗೊಂದಲ, ಸಂಶಯ ಉಂಟಾಗಿ ತಲುಪಬೇಕಾಗಿದ್ದ ಅಂತಿಮ ರೇಖೆಯ ಒಂದು ಮೀಟರ್ ಮೊದಲೇ ಓಟ ನಿಲ್ಲಿಸಿಬಿಟ್ಟರು. ಇನ್ನೂ ಸ್ವಲ್ಪ ಓಡು ಓಡು' ಎಂಬ ಪ್ರೇಕ್ಷಕರ ಕೂಗೂ ಅವರಿಗೆ ತಿಳಿಯಲಿಲ್ಲ. ಅವರ ಹಿಂದಿನಿಂದ ಓಡಿ ಬರುತ್ತಿದ್ದ ಸ್ಪೇನ್ ಕ್ರೀಡಾಪಟು 24 ವರ್ಷದ ಇವಾನ್ ಫರ್ನಾಂಡಿಸ್ ಅನಯಾ ಇದನ್ನು ಗಮನಿಸಿದರು. ಅಂತಿಮ ರೇಖೆ ಯಾವುದೆಂದು ತಿಳಿಯದೆ ಗೊಂದಲವುಂಟಾಗಿ ನಿಂತಿದ್ದಾರೆಂಬುದು ಇವಾನ್‌ಗೆ ಅರ್ಥವಾಯಿತು. “ಹೇ! ಅಬೆಲ್ ನಿಲ್ಲಬೇಡ ಇನ್ನೂ ಮುಂದೆ ಓಡು' ಎಂದು ಜೋರಾಗಿ ಒದರಿದರು. ಆದರೆ ಅಬೆಲ್‌ಗೆ ಭಾಷೆ ತಿಳಿಯದ್ದರಿಂದ ಅಲ್ಲಿಯೇ ನಿಂತಿದ್ದರು. ಅಷ್ಟಕ್ಕೇ ಸುಮ್ಮನಿರದ ಇವಾನ್ ತನ್ನ ಓಟದ ಜೊತೆಗೆ ಅಬೆಲ್‌ರನ್ನು ರಭಸದಿಂದ ನೂಕಿ ಅಂತಿಮ ರೇಖೆ ದಾಟುವಂತೆ ಮಾಡಿದರು. ನಿರ್ಣಾಯಕರ ತೀರ್ಪು ಬಂದಾಗ ಅಬೆಲ್ ಮೊದಲನೇ ಸ್ಥಾನ ಹಾಗೂ ಇವಾನ್ ಎರಡನೇ ಸ್ಥಾನ ಪಡೆದಿದ್ದರು. ಪ್ರಥಮ ಸ್...