ಹಳೆ ನೆನಪಿನ ಅನುಭವ
ಹುಟ್ಟಿದ ಊರನು ಬಿಟ್ಟು ಬಂದ ಮೇಲೆ ಮತ್ತೇನು ಬಿಡುವುದು ಬಾಕಿ ಇದೆ ಎನ್ನುವಂತೆ. ನಮ್ಮ ಜೀವನ ಹುಟ್ಟಿನಿಂದ ಹಿಡಿದು ಸಾಯುವವರೆಗೂ ಹುಟ್ಟಿದ ಊರನು ಬಿಟ್ಟು ಬರಲೇಬೇಕು. ಬಾಲ್ಯದಿಂದ ಶುರುವಾಗುವ ನಮ್ಮ ಜೀವನ ನಮ್ಮನು ಯಾವುದೋ ಕಾಣದ ಪ್ರಪಂಚಕ್ಕೆ ಸೆಳೆದುಕೊಂಡು ಹೋಗುತ್ತದೆ. ನಮ್ಮ ಬಾಲ್ಯದಲ್ಲಿ ಎಷ್ಟೋ ಸುಂದರ ಕ್ಷಣಗಳನ್ನು ಅನುಭವಿಸಿದ ನಾವು ಬೆಳೆಯುತ್ತಿದ್ದಂತೆ ಕ್ಷಣ ಕ್ಷಣಕ್ಕೆ ಎಲ್ಲವು ಮರೆಯಾಗುತ್ತದೆ. ಊರಲ್ಲಿ ಗೆಳೆಯರೊಂದಿಗೆ ಕೂಡಿ ಆಡಿದ ಮರಕೋತಿ ಆಟ, ಚಿಕುಬುಕು ರೈಲಾಟ, ಸೈಕಲ್ ಗಾಲಿಯಲಗಲಿ ಊರು ಸುತ್ತಿದ ರೇಸಾಟ, ನಮ್ಮೂರಿನ ಬೀಡ್ಜ್ ಮೇಲಿಂದ ಹಳ್ಳಕ್ಕೆ,
ಅಣ್ಣ ತಮ್ಮರೊಂದಿಗೆ ಯಾವುದೋ ಸಣ್ಣ ವಿಷಯಕ್ಕೆ ಜಗಳವಾಡಿದ ಸಂದರ್ಭ, ಎಲ್ಲವು ನಮ್ಮ ಮನನಿಗೆ ಏನೋ ಒಂಥರಾ ಮಿತಿ ನೀಡುತ್ತದೆ ಸಂಗತಿಗಳಾಗಿದ್ದವು. ಸಮಯ ಬದಲಾದಂತೆ ನಾವು ಬದಲಾದದ್ದು ನಮ್ಮ ಅರಿವಿಗೆ ಬರುವುದಿಲ್ಲ. ನಾವು ಬೆಳೆಯುತ್ತಿದ್ದಂತೆ ನಮ್ಮ ಆಸೆಗಳೂ ಬದಲಾಗುತ್ತವೆ, ಹುಟ್ಟಿದ ಊರಲ್ಲಿ ಕಲಿಯುತ್ತಿದ್ದ ನಾವು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೇರೆಡೆ ಹೋಗುವ ಪ್ರಸಂಗ, ಮೊದಲ ಬಾರಿಗೆ ಊರು ಬಿಟ್ಟಾಗ ಆಗುವ ಅನುಭವ, ಕಾಡುವ ನನವು ಚಡಪಡಿಕೆ ನೀಡುತ್ತವೆ. ಎಷ್ಟೋ ಬಾರಿ ನಮ್ಮ ಗೆಳೆಯರು ತಮ್ಮಿಂದ ಇಲ್ಲಿರಲು ಸಾಧ್ಯವಿಲ್ಲವೆಂದು ಮರಳಿ ಊರಿಗೆ ಹೋದಾಗ ಮನದಲ್ಲಿ ಕೊರಗಿರುವುದೂ ಇದೆ, ರಜೆ ಯಾವಾಗ ಸಿಗುತ್ತಪ್ಪ ದೇವರೇ ಎಂದು ಮೊರೆ ಹೊದ್ದದ್ದು ಇದೆ. ವಿದ್ಯಾಭ್ಯಾಸದ ನಂತರ ಜೀವನದಲ್ಲಿ ಬೇಗ ಸೆಟಲ್ ಆಗಬೇಕು ಎಂದು ಉದ್ಯೋಗ ಹುಡುಕುತ್ತ ಬೇರೆಡೆ ಹೊರಟು ಬಿಡುತ್ತವೆ.ಬದುಕು ಎಲ್ಲೋ ಇದ್ದವರನ್ನು ಎಲ್ಲಿಗೋ ಕರೆದೊಯ್ಯುತ್ತದೆ. ಎಲ್ಲ ಸಿಕ್ಕಿದ ಮೇಲೆ ಮರಳಿ ನಮ್ಮ ಬಂದು ಬಳಗ, ಸ್ನೇಹಿತರು, ಕುಟುಂಬದವರ ಪ್ರೀತಿ ಸತ್ತೇವೆ, ಆದರೆ ಆಗ ಸಮಯ ಮೀರಿರುತ್ತದೆ. ಹಾಗಿ, ಮುಂದೆ ಪಶ್ಚಾತಾಪ ಪಡುವ ಬದಲು ಈಗ ಇರುವ ಕಣಗಳನ್ನೇ ಜೀವಿಸೋಣ.
Comments
Post a Comment