ಅಜಾತಶತ್ರು ಶಿವು ,
ಅಜಾತಶತ್ರು ಶಿವು
,
ಮತ್ತೆ ಹುಟ್ಟಿ
ಬಾ ಶಿವು
,
ಕೆಲವೊಂದು ಸಾವು,
ಹೀಗೆ ಬದುಕಿರುವವರನ್ನು
ನಿರ್ಜೀವನಾಗಿಸಿ ಬಿಡುತ್ತದೆ,
ಯಾಕೋ ಏನೋ ಇತ್ತೀಚಿಗೆ ನಾನು
ಕೇಳಿಸಿಕೊಂಡು ಇರುವ
ಅನೇಕ ಸಾವಿನ
ಸುದ್ದಿಗಳು , ದೇವರು
ಎಷ್ಟರಮಟ್ಟಿಗೆ ಕ್ರೂರಿ
ಎಂಬುವಂತಹ ,ನಿರ್ಧಾರಕ್ಕೆ
ಬಂದು ಬಿಡುವಷ್ಟು
ನಂಬಿಕೆಯನ್ನು ಘಾಸಿಗೊಳಿಸಿದೆ,
31ನೇ ತಾರೀಕು
ನಿಧನರಾದ ನಮ್ಮೆಲ್ಲರ
ಆತ್ಮೀಯ ಬಂಧು
ಮುಂಡಾಸ್ ಶಿವಕುಮಾರ್
ಅವರು ನಮ್ಮೆಲ್ಲರ
ಶಿವು ಶಿವಣ್ಣ
ಎಂದೇ ಚಿರಪರಿಚಿತರು
,ಕಳೆದ 35 ವರ್ಷಗಳಿಂದ
ನನಗೆ ಸಂಬಂಧಿಗಳಾಗಿದ,
ಶಿವಣ್ಣ ಎಂಥ ಮನುಷ್ಯ ಎಂದರೆ
ಒಂದು ಬಾರಿ
ಇವರ ಸಂಪರ್ಕ
ಬಂದ ಯಾರೇ
ಆದರೂ, ಅಷ್ಟು
ಸುಲಭವಾಗಿ ಇವರನ್ನು
ಮರೆಯಲಾಗದ ಆಕರ್ಷಕ
ವ್ಯಕ್ತಿತ್ವವನ್ನು ಹೊಂದಿದ್ದರು,
ತಂದೆಯ ಅಕ್ಕಿ ವ್ಯಾಪಾರದಲ್ಲಿ ನುರಿತ ಅಕ್ಕಿ ವ್ಯಾಪಾರಸ್ಥರಾಗಿ ತಮ್ಮ ಜೀವನದ ಪಯಣದಲ್ಲಿ ಯಶಸ್ಸಿನ ಉತ್ತುಂಗ ತಲುಪಲು ಪ್ರಯತ್ನಿಸುತ್ತಿದ್ದ ,ಮಗುವಿನ ಮನಸ್ಸಿನ ನಮ್ಮ ಶಿವಣ್ಣ ರೂಢಿಸಿಕೊಂಡಿದ್ದ ಪ್ರತಿದಿನದ ಗಣಪತಿ ದೇವಸ್ಥಾನದ ಭೇಟಿ ನೀಡಿ ದೈವಭಕ್ತರನ್ನಾಗಿ ಮಾಡಿತು, ಸಂಬಂಧಿಕರ ,ಸ್ನೇಹಿತರು ಯಾರೇ ಯಾವುದೇ ಕಾರ್ಯಕ್ರಮವಿರಲಿ ಶಿವಣ್ಣನ ಪ್ರಸ್ತುತಿ ಇರಲೇ ಬೇಕಾಗಿತ್ತುನಾವು ವಿನೋಬನಗರ ದಲ್ಲಿ ಇರುವತನಕ ನಾವು ಆಡಿದ ಆಟ ಇರಬಹುದು . ಶಿವು ಊರಲ್ಲಿ ಕೂಡಿ ಆಡಿದ ಮರಕೋತಿ ಆಟ, ಚಿಕುಬುಕು ರೈಲಾಟ, ಸೈಕಲ್ ಗಾಲಿಯಲಗಲಿ ಊರು ಸುತ್ತಿದ ರೇಸಾಟ, ನಮ್ಮೂರಿನ ಬೀಡ್ಜ್ ಮೇಲಿಂದ ಹಳ್ಳಕ್ಕೆ,ಕಾಮದಹನ ಹಬ್ಬ ,ಗಣಪತಿ ಹಬ್ಬ, ಯುಗಾದಿ ಹಬ್ಬ, ದೀಪಾವಳಿ ಹಬ್ಬ, ಹೋಳಿ ಹಬ್ಬ ನವರಾತ್ರಿ ಹಬ್ಬದ ಪೂಜೆ ಪುನಸ್ಕಾರಗಳು ಹಾಗೂ ಹರಿದಿನಗಳಲ್ಲಿ ಸಮಯದಲ್ಲಿ ನಡೆದಂತಹ ಹಬ್ಬ ಇರಬಹುದು ಯಾರದೇ ಮನೆಯಲ್ಲಿ ಇರುವಂತಹ ಕಾರ್ಯಕ್ರಮ ವಿರಬಹುದು , ಶಿವು ಇಲ್ಲದೆ ಯಾವುದೇ ಕಾರ್ಯಕ್ರಮಗಳನ್ನು ಉಹಿಕೊಳ್ಳೋಕೆ ಆಗುವುದಿಲ್ಲ ಅಣ್ಣ ತಮ್ಮರೊಂದಿಗೆ ಯಾವುದೋ ಸಣ್ಣ ವಿಷಯಕ್ಕೆ ಜಗಳವಾಡಿದ ಸಂದರ್ಭ, ಎಲ್ಲವು ನಮ್ಮ ಮನನಿಗೆ ಏನೋ ಒಂಥರಾ ಮಿತಿ ನೀಡುತ್ತದೆ ಸಂಗತಿಗಳಾಗಿದ್ದವು,ಪ್ರೀತಿಯಿಂದ ಬೈದರೆ ಏನು ಹೇಳಿದೆ ನಗು ಮುಖದಲ್ಲಿ ಉತ್ತರ ಕೊಡುವ ನಮ್ಮ ಶಿವು ಇಲ್ಲದಂತಾಗಿದೆ , ಶಿವಣ್ಣನ ಪಾತ್ರ ಬಹಳ ಮಹತ್ವ ಆಗಿರುತ್ತಿತ್ತು ,ನಾನು ಕೆಲಸದ ನಿಮಿತ್ತ ಬೆಂಗಳೂರಿಗೆ ವರ್ಗಾವಣೆಗೊಂಡಾಗ ನನಗೆ ಅಕ್ಕಿಯ ಚೀಲವನ್ನು ಪ್ರತಿಬಾರಿಯೂ ತಂದುಕೊಡುತ್ತಿದ್ದ ,ನಮ್ಮ ಪ್ರೀತಿಯ ಶಿವಣ್ಣ ಎಷ್ಟು ಉದಾತ್ತ ಮನೋಭಾವನು ಎಂದರೇ, ಲಾಭವಿಲ್ಲದೆ ಸೇವೆಯನ್ನು ಮಾಡುತ್ತಿದ್ದರು ,ಒಂದು ಅರ್ಥ ದಲ್ಲಿ ಅಜಾತಶತ್ರುನ ಜೀವನ, ನಾನು ಇಷ್ಟಪಡುವ ಬಹಳಷ್ಟು ಜನರಲ್ಲಿ ನಮ್ಮ ಶಿವಣ್ಣ ಕೂಡ ಒಬ್ಬರು ,ಅವರೂ ನಿಧನರಾಗಿರುವ ಎನ್ನುವ ಸುದ್ದಿ ಬರಸಿಡಿಲಿನಂತೆ ಆಗಿತ್ತು ,ಏನು ಆಗದಿರಲಿ ಶಿವನೇ ಅಂದರೂ ಕೂಡ ನಮ್ಮ ಪ್ರಾರ್ಥನೆ ಅರಣ್ಯರೋದನವಾಗಿದೆ ಮಾತ್ರ ರಹಸ್ಯ, ಜವರಾಯ ಬಂದಾಗ ಸುಮ್ಮನೆ ಬರಲಿಲ್ಲ, ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ, ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು. ಮದುವೆಗೋ ಮಸಣಕೋ ಹೋಗೆಂದಕಡೆಗೋಡು ಪದ ಕುಸಿಯೆ ನೆಲವಿಹುದು ಮಂಕುತಿಮ್ಮ, ಆದರೂ ಸಾಯುವ ವಯಸ್ಸಲ್ಲ ,ನಮ್ಮವರನ್ನೆಲ್ಲ ತೊರೆದು ಹೋದ ಶಿವಣ್ಣ ನಿನಗೆ ಸದ್ಗತಿ ದೊರೆಯಲಿ ,ಕುಟುಂಬಕ್ಕೆ ಹಾಗೂ ನಮ್ಮ ಅಪಾರವಾದ ಸ್ನೇಹಿತ ಬಳಗಕ್ಕೆ ,ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ … ಮತ್ತೆ ಹುಟ್ಟಿ ಬಾ ಶಿವು...... ಶಿವಣ್ಣ
Comments
Post a Comment