Posts

Showing posts from December, 2022

ಅಜಾತಶತ್ರು ಚನ್ನಬಸಮ್ಮಅಜ್ಜಿ

  ” ಭಾವಪೂರ್ಣ ಶ್ರದ್ಧಾಂಜಲಿ ." ಪ್ರೀತಿಯ ಅಜಾತಶತ್ರು ಚನ್ನಬಸಮ್ಮಅಜ್ಜಿ ಕಳೆದುಕೊಂಡು ನಾವೆಲ್ಲ ಅನಾಥರಾಗಿದ್ದೇವೆ .   ಇವತ್ತು ( 28-11-2022 ) ಚನ್ನಬಸಮ್ಮ ಅಜ್ಜಿ ಇನ್ನು ಮುಂದೆ ನಮ್ಮೊಂದಿಗೆ ಇಲ್ಲ ಎಂದು ನನಗೆ ನಂಬಲು ಸಾಧ್ಯವಿಲ್ಲ, ಚನ್ನಬಸಮ್ಮ ಅಜ್ಜಿ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು , ಅಜ್ಜಿ ಕೆಲವೊಂದು ಸಾವು , ಹೀಗೆ ಬದುಕಿರುವವರನ್ನು ನಿರ್ಜೀವನಾಗಿಸಿ ಬಿಡುತ್ತದೆ ,ನಿಮ್ಮ ಅಗಲಿಕೆಯನ್ನ ಅದ್ಹೇಗೆ ತಡೆದುಕೊಳ್ತೀವೋ ಗೊತ್ತಿಲ್ಲ . ಚನ್ನಬಸಮ್ಮ ಅಜ್ಜಿ ತೋರಿಸಿದ ದಾರಿಯನ್ನ ಎಂದಿಗೂ ಮರೆಯಲ್ಲ ಸಾಧ್ಯವಿಲ್ಲ .  ಸರಿಯಾದ ದಾರಿಯಲ್ಲಿ   ನಮ್ಮನ್ನಷ್ಟೇ ನಡೆಸದೆ , ಎಲ್ಲರಿಗೂ ಚನ್ನಬಸಮ್ಮ ಅಜ್ಜಿ   ತೋರಿಸುತ್ತಿದ್ದ ಪ್ರೀತಿ , ವಾತ್ಸಲ್ಯದ ಜೊತೆಗೆ ಅತಿಥಿ ದೇವೋ ಭವ ಅಂತ ಮನೆಗೆ ಬಂದವರಿಗೆಲ್ಲ ಹೊಟ್ಟೆ ತುಂಬ ಊಟ ಬಡಿಸುವ ನಿಮ್ಮ ಗುಣ , ಸಹನಾ ಶಕ್ತಿ , ಸುತ್ತಮುತ್ತಲಿನವರ ಕಾಳಜಿ ಮತ್ತು ಪ್ರೀತಿ ಧೈರ್ಯ ತುಂಬುವ ರೀತಿ ಎಂದೂ ಮರೆಯಲ್ಲ ಯಾವುದೇ ಮದುವೆ   ಸಭೆ ಸಮಾರಂಭ ನಿಮ್ಮ ಮುಂದಾಳತ್ವದಲ್ಲಿ ನಡೆಯುತ್ತಿದ್ದ ಕಾಲದಲ್ಲಿ ಇ ಗೂ ನಾನು ಕಣ್ಣ ಮುಂದೆ   ನೆನಪಿದೆ .   ಯಾರು ಏನೇ ಅಂದ್ರು ಅವರಿಗೆ ಒಳ್ಳೆಯದಾಗಲಿ , ಚೆನ್ನಾಗಿರಿ ಅಂತಾ ಹೇಳುವ ನಿಮ್ಮ ಮನಸ್ಸು ನಮ್ಮದಾಗಲಿ . ನೀವ...