ಒಳ್ಳೆಯ ಕಲ್ಪನಾಶಕ್ತಿ ಮತ್ತು ದೂರದರ್ಶಿತ್ವವನ್ನು ರೂಢಿಸಿಕೊಳ್ಳಿ

 

ಒಳ್ಳೆಯ ಕಲ್ಪನಾಶಕ್ತಿ ಮತ್ತು ದೂರದರ್ಶಿತ್ವವನ್ನು ರೂಢಿಸಿಕೊಳ್ಳಿ

 

ದೇವರು ಮನುಷ್ಯರಿಗೆ ಅದ್ಭುತ ಕಲ್ಪನಾಶಕ್ತಿಯನ್ನು ಕೊಟ್ಟಿದ್ದಾನೆ. ನಮ್ಮ ವೈಯಕ್ತಿಕ ಆಶೆ ಆಕಾಂಕ್ಷೆಗಳು ನಮ್ಮ ಅಂತರಂಗದಲ್ಲಿ ಹುದುಗಿದ್ದು, ನಾವು ಅವುಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತೇವೆ. ಇದನ್ನು ಕನಸು ಎಂದು ಬೇಕಾದರೂ ಕರೆಯಬಹುದು. (ನಿದ್ರೆಯಲ್ಲಿ ತನ್ನಷ್ಟಕ್ಕೆ ತಾನೇ ಬರುವ ಕನಸಲ್ಲ). ನಮ್ಮ ಜೀವನದಲ್ಲಿ ಸಂಭವಿಸುವ ವಿದ್ಯಮಾನಗಳೆಲ್ಲ ಇಂತಹ ಕಲ್ಪನೆಗಳ ಫಲವೆಂದರೆ ತಪ್ಪಾಗುವುದಿಲ್ಲ. ಪ್ರಪಂಚದ ಖ್ಯಾತ ವಿಜ್ಞಾನಿಗಳು ಸಾಹಿತಿಗಳು ಇವರೆಲ್ಲ ಅದ್ಭುತ ಕನಸುಗಾರರೆ ಆಗಿದ್ದಾರೆ. ಕಂಡರಿಯದ ಕೇಳರಿಯದ ವಿಮಾನದ ಬಗ್ಗೆ ಕನಸು ಕಂಡ ರೈಟ್ ಸಹೋದರರು ವಿಮಾನದ ಆವಿಷ್ಕಾರಕ್ಕೆ ಕಾರಣಕರ್ತರಾದರು. ಈ ಎಲ್ಲಾ ಕನಸುಗಾರರೂ ಆಶಾವಾದಿಗಳೂ ಸಕಾರಾತ್ಮಕವಾಗಿ ಆಲೋಚಿಸುವವರೆ ಆಗಿದ್ದಾರೆ. ಯಾವಾಗಲೂ ಪರೀಕ್ಷೆಯ ಬಗ್ಗೆ ಆಲೋಚಿಸುತ್ತ ಉತ್ತಮ ಫಲಿತಾಂಶದ ಕಲ್ಪನೆಯಲ್ಲಿ ತೊಡಗಿರುವ ವಿದ್ಯಾರ್ಥಿ ಆ ದಿಶೆಯಲ್ಲಿ ಸಫಲನಾಗುವುದರಲ್ಲಿ ಯಾವ ಅನುಮಾನವೂ ಇಲ್ಲ.ಕಲ್ಪನೆಗಳೂ ಸಾಕಾರವಾಗುವುದಕ್ಕೆ ಕಾರಣವೇನು? ಇದಕ್ಕೆ ಕಾರಣವೇನೆಂದರೆ, ನಾವು ಕಲ್ಪಿಸಿದ ವಿಷಯವನ್ನೇ ಮನನ ಮಾಡುತ್ತಿದ್ದರೆ ಆ ದಿಶೆಯಲ್ಲಿ ಪ್ರಯತ್ನ ಪಡುವ ಸ್ಫೂರ್ತಿ ಸಿಗುತ್ತದೆ. ಪ್ರಯತ್ನಕ್ಕೂ ಯಶಸ್ಸಿಗೂ ಇರುವ ನಂಟು ಎಲ್ಲರಿಗೂ ಗೊತ್ತಿರುವ ವಿಷಯ. ಮನೆಯ ಬಗ್ಗೆಯೇ ಕನಸು ಕಟ್ಟುವವರು ಅದನ್ನು ಹೊಂದೇ ತೀರುತ್ತಾರೆ. ಹೀಗೆ ವಿಶೇಷವಾಗಿ ಕಲ್ಪನೆ ಮಾಡುವವರು ಆಲಸಿಗಳಾಗಿರುವುದಿಲ್ಲ. ಕಲ್ಪನೆಯ ಸಾಕಾರಕ್ಕೆ ಎಡೆಬಿಡದೆ ಶ್ರಮಿಸುತ್ತಾರೆ. ಕಲ್ಪನೆಯನ್ನು ನಿಜ ಮಾಡಲು ಹಲವು ರೀತಿಯಲ್ಲಿ ಪ್ರಯತ್ನಿಸಿ ಜಯಶೀಲರಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಮಹಾತ್ಮ ಗಾಂಧೀಜಿಯವರು ಭಾರತದ ಸ್ವತಂತ್ರದ ಬಗ್ಗೆ ಕನಸು ಕಂಡಿದ್ದರು. ನೆಲ್ಸನ್ ಮಂಡೇಲ ಸಹ ಆಫ್ರಿಕಾದ ಸ್ವತಂತ್ರದ ಬಗ್ಗೆ ಕಲ್ಪಿಸಿಕೊಂಡಿದ್ದರು. ಇವರಿಬ್ಬರ ಕನಸುಗಳು ಸಾಕಾರಗೊಂಡವು. ಕನಸುಗಳು ನಿಜವಾಗುವುದು ನಾವು ಎಷ್ಟು ಪ್ರಬಲವಾಗಿ ಕನಸು ಕಾಣುತ್ತೇವೆ ಎಂಬುದರ,ನಿಜವಾಗು ಮೇಲೆ ನಿರ್ಧಾರವಾಗುತ್ತದೆ. ನಾವು ಮಾಡುವ ಸಕಾರಾತ್ಮಕ ಆಲೋಚನೆಗಳು ವುದರಲ್ಲಿ ಯಾವ ಸಂದೇಹವೂ ಇಲ್ಲ. ಆಲೋಚನೆಗಳಿಗೆ ನಿಮ್ಮನ್ನು ಕಾರ್ಯ ತತ್ಪರರನ್ನಾಗಿ ಎಂಬುದನ್ನು ಮರೆಯಬೇಡಿ. ಕಲ್ಪನೆ ಮಾಡಿಕೊಂಡನಂತರ ಅದನ್ನು ಸಾಕಾರಗೊಳಿಸುವ ಶಕ್ತಿಯಿದೆ ದಿಕ್ಕಿನಲ್ಲಿ ಸತತವಾಗಿ ಆಲೋಚನೆ ಮಾಡಬೇಕು. ಇವೆಲ್ಲ ತನ್ನಷ್ಟಕ್ಕೆ ತಾನೇ ನಡೆಯುತ್ತ ಅಂದರೆ, ಕಲ್ಪನೆ-ಆಲೋಚನೆ- ದಿಸೆಯಲ್ಲಿ ಕಾರ್ಯತತ್ಪರತೆ-ಯಶಸ್ಸು. ಮಾಡುವ,ನಿಮ್ಮ ವರ್ತಮಾನ ಪರಿಸ್ಥಿತಿ, ಬಡತನ ಇತ್ಯಾದಿಗಳು ನಿಮ್ಮ ಕಲ್ಪನೆಗೆ ಮತ್ತು ಅವುಗಳ ಸಾಕಾರಕ್ಕೆ ಯಾವ ರೀತಿಯ ಅಡಚಣೆಯನ್ನೂ ಉಂಟು ಮಾಡುವುದಿಲ್ಲ.ಪೊವರ್ಡ್ ಕಸ್ಟನ್ ಒಬ್ಬ ಪ್ರಸಿದ್ಧ ಐಂದ್ರಜಾಲಕ. ಆತ ಹಿಂದೆ ಕಡು ಬಡತನ ದಲ್ಲದ್ದ, ಬಾಲಕನಾಗಿದ್ದಾಗ ಆತ ವಾರ್ತಾಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುತ್ತಿದ್ದ. ಅಲ್ಲಿನ ಶೀತವನ್ನು ತಡೆಯುವ ಒಳ್ಳೆಯ ಉಡುಪು ಸಹ ಇರಲಿಲ್ಲ. ಆದರೆ ಆತ ಸುಂದರ ಪೋಷಾಕು ಧರಿಸಿ ಹೋಗುವವರನ್ನು ನೋಡಿದಾಗ ತಾನು ಸಹ ಒಂದಲ್ಲ ಒಂದು ದಿನ ಇದೇ ರೀತಿ ಪೋಷಾಕು ಧರಿಸಿ ಹೋಗುವಾಗ ತನ್ನನ್ನು ಎಲ್ಲರೂ ಗಮನಿಸುವಷ್ಟು ದೊಡ್ಡ ಮನುಷ್ಯನಾಗಬೇಕೆಂದು ಕನಸು ಕಾಣತೊಡಗಿದ. ಕನಸು ಆತನಲ್ಲ ಒಂದು ದೃಢನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತು. ಆತ ಕ್ಷಣದಲ್ಲಿ ಒಂದು ತುಕ್ಕು ಹಿಡಿದಿದ್ದ ಮೊಳೆಯನ್ನು ತೆಗೆದುಕೊಂಡು ತನ್ನ ಹೆಸರು ಮತ್ತು ದಿನದ ತಾರೀಖನ್ನು ಗೀಚಿದ. ದೃಢ ನಿರ್ಧಾರ, (ಕನಸಿನಿಂದ ಉಂಟಾದ ನಿರ್ಧಾರ) ಆತನನ್ನು ಕಾರ್ಯಪ್ರವರ್ತಕನನ್ನಾಗಿ ಮಾಡಿ ಮುಂದೆ ಜಗತೃಸಿದ್ಧ ಐಂದ್ರಜಾಲಕನನ್ನಾಗಿ ಮಾಡಿತು.

Comments

Popular posts from this blog

(ಹೆಳವರು/Narrators)

26.8.2025

ಏನನ್ನೂ ಮಾಡದಿರುವುದು