26.8.2025
ಪಾಟೀಲ, ತಿನ್ನಲು ಹೋಗುವಾಗ, ತಟ್ಟೆ ಖಾಲಿಯಾದರೆ ಏನು ಮಾಡಬೇಕು?
ಮತ್ತೊಂದು ತಟ್ಟೆಯನ್ನು ತೆಗೆದುಕೊಳ್ಳಬೇಕು!
ಪಾಟೀಲ, ನಿಮ್ಮ ಫೋನ್ ಕೈಯಿಂದ ಕೆಳಗೆ ಬಿದ್ದರೆ, ಅದನ್ನು ಹಿಡಿದುಕೊಳ್ಳಲು ಯಾವ ಟ್ರಿಕ್ ಬಳಸುತ್ತೀರಿ?
ಗುರುತ್ವಾಕರ್ಷಣ ಶಕ್ತಿಗೆ ವಿರುದ್ದವಾದ ಆ್ಯಪ್ ಬಳಸಿದರಾಯಿತು!
ಪಾಟೀಲ, ಬ್ಯಾಂಕಿನ ಖಾತೆಯಲ್ಲಿ ಕೊನೆಯಲ್ಲಿ ಒಂದು ರುಪಾಯಿ ಉಳಿದಾಗ ಏನು ಮಾಡಬೇಕು?
ಆಗ ದೊಡ್ಡ ಕನಸು ಕಾಣಬೇಕು, ಆ ಒಂದು ರುಪಾಯಿ ಒಂದು ದಿನ ಕೋಟಿ ಆಗುತ್ತದೆ!
ಪಾಟೀಲ, ಮನೆಯಲ್ಲಿ ಅತಿ ಹೆಚ್ಚು ಕೆಲಸ ಮಾಡುವವರು ಯಾರು?
ಯಾವುದೇ ವಿವಾದ ಇರಬಾರದು ಅಂತ ಬಯಸಿದರೆ, ನಿಮ್ಮ ಹೆಂಡತಿ ಎಂದು ಹೇಳಬೇಕು!
ಪಾಟೀಲ, ಜೇಬಿನಲ್ಲಿ ಸಿಗುವ ಅತಿ ಬೆಲೆಬಾಳುವ ವಸ್ತು ಯಾವುದು?
ಅದು ಜೇಬಿನಲ್ಲಿರುವ ಖಾಲಿ ಜಾಗ, ಏಕೆಂದರೆ ಅದಕ್ಕೆ ಬೇರೆ ಯಾವುದೂ ಪ್ರವೇಶಿಸಲು ಸಾಧ್ಯವಿಲ್ಲ!
ಪಾಟೀಲ, ಹಸಿವಾಯಿತೇ ಎಂದು ಸ್ನೇಹಿತರು ಕೇಳಿದರೆ ಏನು ಹೇಳಬೇಕು?
ಬಿಲ್ ಕೊಡುವವರು ಯಾರು ಎಂಬುದನ್ನು ಆಧರಿಸಿ ಉತ್ತರಿಸಬೇಕು!
ಪಾಟೀಲ , ಕಣ್ಣಿನಲ್ಲಿ ಸಣ್ಣ ಕೂದಲು ಬಿದ್ದರೆ ಏನು ಮಾಡಬೇಕು?
ಅದು ಹೋಗುವ ತನಕ ನೋಡುತ್ತಿರಬೇಕು!
ಪಾಟೀಲ ,ನಿಮ್ಮ ಬಳಿ ಇರುವ ಜಾಣಶಕ್ತಿ ಯಾವುದು?
ಬರೆಯುವಾಗ ಮನಸ್ಸನ್ನು.
ಪಾಟೀಲ, ಹಿಂದುಗಳೆಲ್ಲರೂ ಕನಿಷ್ಠ ನಾಲ್ಕು ಮಕ್ಕಳಿಗಾದರೂ ಜನ್ಮ ನೀಡ ಬೇಕು ಅಂದ್ರೆ ಹೇಗೆ?
ಇದನ್ನು ಲಾಲೂ-ರಾಬಿ ಎಂದೋ ಜಾರಿಗೆ ತಂದಿದ್ದಾರಲ್ಲ?!
ಮೋದಿ ಪ್ರಣೀತ 'ಸ್ವಚ್ಛ ಭಾರತ' ಕಾರ್ಯಕ್ರಮ ಯಶಸ್ವಿ ಯಾಗಿದೆಯಾ?
ಯಶಸ್ವಿ ಆಗಿದೆ ಅಂದುಕೊಳ್ಳುತ್ತಿರು ವಾಗಲೇ, ಅವರು ತಮ್ಮ ಪಕ್ಷಕ್ಕೆ ಕಸಗಳನ್ನು ಸೇರಿಸಿಕೊಳ್ಳುತ್ತಾರೆ!
ಪಾಟೀಲ , ಅದೃಷ್ಟವಂತ ಗಂಡಸು ಅಂದ್ರೆ ಯಾರು?
ಮದುವೆಯಾದರೂ, ವಿಚ್ಛೇದನ ನೀಡದೇ, ಒಬ್ಬರೇ ಹಾಯಾಗಿ ಬದುಕುತ್ತಿರುವವರು!
ಪಾಟೀಲ , ಹಣದಿಂದ ಸಂತೋಷ ಖರೀದಿಸಲು ಸಾಧ್ಯವಿಲ್ಲ ಅಂತಾರಲ್ಲ?
ಹೂಂ.. ಅಂಥವರ ಬಳಿ ಹಣವಿರು ವುದಿಲ್ಲ, ಇಲ್ಲವೇ ಅವರು ಖರೀದಿಸುವ ವಸ್ತುಗಳು ಸರಿ ಇರುವುದಿಲ್ಲ!
ಪಾಟೀಲ, ಕಾಂಗ್ರೆಸ್ಸಿಗೂ, ಆಮ್ ಆದ್ಮ ಪಕ್ಷಕ್ಕೂ ಏನಾದರೂ ಸಂಬಂಧವಿದೆಯಾ?
ಹೂಂ.. ಕೈ ಇದ್ರೆ ಮಾತ್ರ ಪೊರಕೆ ಬಳಸಬಹುದು ತಾನೇ !
ಪಾಟೀಲ , ಹಣ ಕೇವಲ ಹಾಳೆಯೆಂದು ಕೆಲವರು ಹೇಳ್ತಾರಲ್ಲ?
ಆದ್ರೆ ಯಾರೂ ಅದನ್ನು ಕಸದಬುಟ್ಟಿಗೆ ಎಸೆದ ಉದಾಹರಣೆ ಮಾತ್ರ ಸಿಗುವುದಿಲ್ಲ!
ಪಾಟೀಲ , ಆಲ್ನೋಹಾಲ್ ನೀರಿದ್ದಂತೆ ಅಂತ ಹೇಳ್ತಾರಲ್ಲ?
ಹೌದು, ಆದರೆ ಅದಕ್ಕೆ ಭಾವನೆ-ಉವಾದ ಸೇರಿರೋದು ಯಾರಿಗೂ
ಪಾಟೀಲ, ಹೇಳೋನು ಮಾಡಲ್ಲ, ಮಾಡೋನು ಹೇಳಲ್ಲ, ತಿಂದವನು?
*ತೇಗಲ್ಲ!*
ಪಾಟೀಲ, ಹಿಂದಿನವರು 'ಮನೆ ಕಟ್ಟಿನೋಡು, ಮದುವೆ ಮಾಡಿ
ನೋಡು' ಎನ್ನುತ್ತಿದ್ದರು.
ಈಗಿನವರು?
*ತಾಳಿ ಕಟ್ಟಿ ನೋಡು, ಮಕ್ಕಳ ಮಾಡಿ ನೋಡು*
ಪಾಟೀಲ, ಸಿನಿಮಾದಲ್ಲಿ ನೋವು-ನಲಿವುಗಳಿಗೆ ಹಾಡುಗಳನ್ನು ಹಾಡ್ತಾರೆ. ನಿಜ ಜೀವನದಲ್ಲಿ?
ಎಣ್ಣೆ ಅಂಗಡಿಗೆ ಹೋಗ್ತಾರೆ!
ಪಾಟೀಲ, ನಿಮ್ಮ ಮಾಜಿ ಪ್ರೇಯಸಿಈಗಲೂ ಸಂಪರ್ಕದಲ್ಲಿ ಇದ್ದಾರಾ?
*ಪ್ರೇಯಸಿ ಯಾವತ್ತೂ ಮಾಜಿ
ಆಗುವುದಿಲ್ಲ ಗೊತ್ತಿರಲಿ*
ಪಾಟೀಲ, ಕೆಲವರು ಕಿತ್ತೋಗುತ್ತೆ ಅಂತ ಗೊತ್ತಿದ್ರೂ ಎಳೆಯುವುದನ್ನು
ಬಿಡುವುದಿಲ್ಲವಲ್ಲ?
ಕಿತ್ತೋಗಲಿ ಎಂಬುದೇ ಅವರ
ಉದ್ದೇಶ ಆಗಿರುತ್ತದೆ!
ಪಾಟೀಲ, ಹುಚ್ಚುತನವೇ ಶ್ರೇಷ್ಠತೆ ಅಂದ್ರೆ ನಿಮಗೆ ಏನನಿಸುತ್ತದೆ?
*ಆ ಅವಿವೇಕಿ ಚೇತನ್ ಹಿಂಸೆ ನೆನಪಾಗುತ್ತಾನೆ! *
ಪಾಟೀಲ ,ನನ್ನ ಹೆಂಡತಿ ಗೋಡೆ ದೂರದ ಸಂಬಂಧಿ
ಅನಿಸುತ್ತಿದೆಯಲ್ಲ?
*ಯಾಕೆ ನಿಮ್ಮ ಪರ್ಸಿನಲ್ಲಿರುವ ಗಾಂಧಿ ನೋಟುಗಳನ್ನೆಲ್ಲಾ ಮುಗಿಸುತ್ತಿದ್ದಾಳಾ?! *
ಈ ಸೋಷಿಯಲ್ ಮೀಡಿಯಾ ದಿನದಲ್ಲಿ ಸೌಜನ್ಯ, ಗೌರವ ಅಂದ್ರೆ ಏನು ಪಾಟೀಲ ?
*ಮೊಬೈಲ್ ಬದಿಗಿಟ್ಟು, ಇನ್ನೊಬ್ಬರ ಮಾತಿಗೆ ಗಮನಕೊಡುವ ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳುವುದು! *
ಪಾಟೀಲ, ಪತ್ನಿಯೇ ಪ್ರತ್ಯಕ್ಷ ದೇವತೆ ಅಂದರೆ ಹೇಗೆ?
*ಆಗ 'ಪತಿಯೇ ಪರರ ದೈವ' ಎನ್ನಬಹುದು! *
*ಪಾಟೀಲ, ಅಡುಗೆ ಮಾಡುವವರಿಗೆ ಇರಬೇಕಾದ ಮುಖ್ಯ ಗುಣ ಯಾವುದು?*
ಅಡುಗೆ ಮತ್ತು ಊಟ ಮಾಡುವವರ ಮೇಲೆ ಪ್ರೀತಿ!
*ಪಾಟೀಲ , ಅಡುಗೆ ಮನೆ ಅಸ್ತವ್ಯಸ್ತವಾ ಗಿದ್ದರೆ ಅದು ಏನನ್ನು ಸೂಚಿಸುತ್ತದೆ?*
ಆ ಮನೆಯಲ್ಲಿರುವವರು ಆನಂದ ದಿಂದ ಇದ್ದಾರೆ ಎಂಬುದನ್ನು ಸೂಚಿಸುತ್ತದೆ!
*ಪಾಟೀಲ್, ಕೇಕ್ ಇಲ್ಲದ ಪಾರ್ಟಿ ಯನ್ನು ಏನೆಂದು ಕರೆಯ ಬಹುದು?*
మింటింగో!
*ಪಾಟೀಲ , ನಿಮ್ಮ ದೃಷ್ಟಿಯಲ್ಲಿ ರಜಾದಿನ ಹೇಗಿರಬೇಕು?*
ಏನೇ ತಿಂದರೂ ಕ್ಯಾಲೋರಿ ಏರಬಾರದು ಅಂತಿರಬೇಕು!
*ಪಾಟೀಲ , ಅಡುಗೆ ಮಾಡಲು ಕಲಿತ ವರು ಏನನ್ನು ಕಲಿಯುವುದಿಲ್ಲ?*
ಅಡುಗೆಮನೆ ಸ್ವಚ್ಛಗೊಳಿಸುವುದನ್ನು!
*ಪಾಟೀಲ್, ಮನಸ್ಸನ್ನು ಪ್ಯಾರಶೂಟ್‌ಗೆ ಹೋಲಿಸುತ್ತಾರಲ್ಲ?*
ಕಾರಣ ಅವನ್ನು ಓಪನ್ ಮಾಡಿದಾಗ ಮಾತ್ರ ಕೆಲಸ ಮಾಡುತ್ತದಲ್ಲ?!
*ಪಾಟೀಲ , ನಿಮ್ಮ ದೃಷ್ಟಿಯಲ್ಲಿ 4 ಜನರ ಮುಂದೆ ನಮಗೆ ಸಿಗಬಹುದಾದ ಸದವಕಾಶ ಅಂದ್ರೆ ಯಾವುದು?*
ಬಾಯಿ ಮುಚ್ಚಿಕೊಂಡಿರುವ ಅವಕಾಶ!
*ಪಾಟೀಲ , ಸಂತೃಪ್ತ ಮತ್ತು ಸಂತಸ ಜೀವನ ಅನ್ನೋದು ಇಲ್ಲ ಅಂತಾರಲ್ಲ?*
ಹೂಂ.. ಅದು ಇಲ್ಲ, ಆದರೆ ಅದನ್ನು ನಾವು ಸೃಷ್ಟಿಸಿಕೊಳ್ಳಬಹುದು!
*ಪಾಟೀಲ , ನೀವು ಬಹಳ ಆರ್ಗ್ಯುಮೆಂಟ್ ಮಾಡ್ತೀರಿ ಅಂತ ಇಲ್ಲೊಬ್ಬಳು ಹೇಳ್ತಾಳಲ್ಲ?*
ಅದು ಆರ್ಗ್ಯುಮೆಂಟ್ ಅಲ್ಲ, ನಾನು ಸರಿ ಹೇಗೆ ಎಂಬುದನ್ನು ಸರಳವಾಗಿ ಹೇಳುವ ಪರಿ!
Comments
Post a Comment