ಅಜಾತಶತ್ರು ಚನ್ನಬಸಮ್ಮಅಜ್ಜಿ
” ಭಾವಪೂರ್ಣ ಶ್ರದ್ಧಾಂಜಲಿ."
ಪ್ರೀತಿಯ ಅಜಾತಶತ್ರು
ಚನ್ನಬಸಮ್ಮಅಜ್ಜಿ ಕಳೆದುಕೊಂಡು ನಾವೆಲ್ಲ ಅನಾಥರಾಗಿದ್ದೇವೆ. ಇವತ್ತು (28-11-2022) ಚನ್ನಬಸಮ್ಮ ಅಜ್ಜಿ ಇನ್ನು ಮುಂದೆ ನಮ್ಮೊಂದಿಗೆ ಇಲ್ಲ ಎಂದು ನನಗೆ ನಂಬಲು ಸಾಧ್ಯವಿಲ್ಲ, ಚನ್ನಬಸಮ್ಮ ಅಜ್ಜಿ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಅಜ್ಜಿ ಕೆಲವೊಂದು ಸಾವು, ಹೀಗೆ ಬದುಕಿರುವವರನ್ನು ನಿರ್ಜೀವನಾಗಿಸಿ ಬಿಡುತ್ತದೆ ,ನಿಮ್ಮ ಅಗಲಿಕೆಯನ್ನ ಅದ್ಹೇಗೆ ತಡೆದುಕೊಳ್ತೀವೋ ಗೊತ್ತಿಲ್ಲ. ಚನ್ನಬಸಮ್ಮ ಅಜ್ಜಿ ತೋರಿಸಿದ ದಾರಿಯನ್ನ ಎಂದಿಗೂ ಮರೆಯಲ್ಲ ಸಾಧ್ಯವಿಲ್ಲ. ಸರಿಯಾದ ದಾರಿಯಲ್ಲಿ ನಮ್ಮನ್ನಷ್ಟೇ ನಡೆಸದೆ, ಎಲ್ಲರಿಗೂ ಚನ್ನಬಸಮ್ಮ ಅಜ್ಜಿ ತೋರಿಸುತ್ತಿದ್ದ ಪ್ರೀತಿ, ವಾತ್ಸಲ್ಯದ ಜೊತೆಗೆ ಅತಿಥಿ ದೇವೋ ಭವ ಅಂತ ಮನೆಗೆ ಬಂದವರಿಗೆಲ್ಲ ಹೊಟ್ಟೆ ತುಂಬ ಊಟ ಬಡಿಸುವ ನಿಮ್ಮ ಗುಣ, ಸಹನಾ ಶಕ್ತಿ, ಸುತ್ತಮುತ್ತಲಿನವರ ಕಾಳಜಿ ಮತ್ತು ಪ್ರೀತಿ ಧೈರ್ಯ ತುಂಬುವ ರೀತಿ ಎಂದೂ ಮರೆಯಲ್ಲ ಯಾವುದೇ ಮದುವೆ ಸಭೆ ಸಮಾರಂಭ ನಿಮ್ಮ ಮುಂದಾಳತ್ವದಲ್ಲಿ ನಡೆಯುತ್ತಿದ್ದ ಕಾಲದಲ್ಲಿ
ಇ ಗೂ ನಾನು ಕಣ್ಣ ಮುಂದೆ ನೆನಪಿದೆ. ಯಾರು ಏನೇ ಅಂದ್ರು ಅವರಿಗೆ ಒಳ್ಳೆಯದಾಗಲಿ, ಚೆನ್ನಾಗಿರಿ ಅಂತಾ ಹೇಳುವ ನಿಮ್ಮ ಮನಸ್ಸು ನಮ್ಮದಾಗಲಿ. ನೀವು ನಮ್ಮನ್ನ ಅಗಲಿ ನಮಗೆ ತುಂಬಲಾರದ ನಷ್ಟವಾಗಿದೆ. ದೇವರು ನಿಮಗಾಗಿ
ಒಂದು ದೊಡ್ಡ ಯೋಜನೆಗಳನ್ನು ಹೊಂದಿದ್ದಾನೆ ಎಂದು ನಾನು ಹೀಗೆ ನಂಬಬೇಕಾಗಿದೆ ,ನೀವು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸದಾ ನಡೆಯುತ್ತೇವೆ. ನಿಮ್ಮ ಆಸೆಯಂತೆ ಎಲ್ಲವೂ ನಡೆಯುತ್ತೆ ಅಂತಾ ಹೇಳುತ್ತಾ ತಮ್ಮ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ನಗರದ ಕುಟುಂಬಕ್ಕೆ ಆದ ನಷ್ಟವನ್ನು ಸರಿಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಮುಂಬರುವ ದಿನಗಳನ್ನು ಧೈರ್ಯವಾಗಿ ಎದುರಿಸಬೇಕಾಗಿರುವ ಅನಿವಾರ್ಯತೆ ಇದೆ, ಒಬ್ಬ ಉತ್ತಮ ಗೃಹಿಣಿ ಆಗಿದ್ದು ಕೇವಲ ದೇವರ ವರದಿಂದ, ಅಲ್ಲಾ ತ್ಯಾಗ, ಸಹನೆ, ಪ್ರೀತಿಯಿಂದ. ಹೀಗೆ ಜೀವನದ ಎಲ್ಲಾ ಏರಿಳಿತದ ಸಂದರ್ಭವನ್ನು ಧೈರ್ಯವಾಗಿ ನಿಭಾಯಿಸಿಕೊಂಡು ಬಂದಿರುತ್ತಾರೆ. ಅದನ್ನು ನಿಮ್ಮ ಮಕ್ಕಳಿಗೂ
ನಿಭಾಯಿಸುವ ಶಕ್ತಿ ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತಾ.. ಜವರಾಯ ಬಂದಾಗ ಸುಮ್ಮನೆ ಬರಲಿಲ್ಲ, ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ, ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು. ಮದುವೆಗೋ ಮಸಣಕೋ ಹೋಗೆಂದಕಡೆಗೋಡು ಪದ ಕುಸಿಯೆ ನೆಲವಿಹುದು ಮಂಕುತಿಮ್ಮ, ಕೊನೆಯ ಉಸಿರು ಎಳೆದಾಗ ಒಂದು ನಿಧಿಯನ್ನು ಕಳೆದುಕೊಂಡ ಅನುಭವ ಸಂಬಂಧಿಕರಿಗೆ ಆಪ್ತರಿಗೆ ಆದುದರಲ್ಲಿ ಸಂದೇಹವಿಲ್ಲ. ನೆನಪುಗಳು ಮಾಸಬಹುದು... ಭಾವನೆಗಳು ಮಾಸುವುದಿಲ್ಲ ನೋವುಗಳು ಕ್ಷೀಣಿಸಬಹುದು...ನಿಮ್ಮನ್ನು ಬಯಸುವ ಮನಸು ಸದಾ ನಿಮ್ಮೊಡನೆ ಇರುವ...ನಿಮ್ಮ ನಿಷ್ಠೆ, ಕಾರ್ಯ ತತ್ಪರತೆ ಮತ್ತು ಆದರ್ಶ ಗಳು ನಮಗೆ ದಾರಿದೀಪವಾಗಿವೆ, ನಮ್ಮವರನ್ನೆಲ್ಲ ತೊರೆದು ಹೋದ ಚನ್ನಬಸಮ್ಮ ಅಜ್ಜಿ ಸದ್ಗತಿ ದೊರೆಯಲಿ ,ಕುಟುಂಬಕ್ಕೆ ಹಾಗೂ ನಮ್ಮ ಅಪಾರವಾದ ಬಳಗಕ್ಕೆ ,ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ …
ಇಂತಿ ನಿಮ್ಮ ಪ್ರೀತಿಯ ಮೊಮ್ಮಗ
ಅಭಿ ಬಾದಾಮಿ & ಬಾದಾಮಿ ಕುಟುಂಬ (9379062040 )
Comments
Post a Comment