ಗುರಿ ತಲುಪುವ ಬಗೆ

ಗುರಿ ತಲುಪುವ ಬಗೆ...
ಸ್ಪೇನ್‌ನ ಬುರ್ಲಾಡಾ ಶಹರದಲ್ಲಿ 2012 ನೇ ಇಸ್ವಿಯ ಡಿಸೆಂಬರ್ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಮುಂಚೆ ಲಂಡನ್ ಒಲಿಂಪಿಕ್ಸ್‌ನಲ್ಲಿ 3000 ಮೀಟರ್ ಸ್ಪರ್ಧೆಯಲ್ಲಿ ಪದಕ ಗಳಿಸಿದ ಪೂರ್ವ ಆಫ್ರಿಕಾದ ಕೀನ್ಯಾ ದೇಶದ ಜಗತ್ವಸಿದ್ಧ ಓಟಗಾರ ಅಬೆಲ್ ಮಥಾಯಿ ಆರಂಭದಿಂದಲೂ ಎಲ್ಲರಿಗಿಂತ ಸಾಕಷ್ಟು ಮುಂದೆ ಇದ್ದು ಸ್ವರ್ಣ ಪದಕ ತನ್ನದಾಗಿಸುವುದರಲ್ಲಿ ಯಾವ ಸಂಶಯವೂ ಇರಲಿಲ್ಲ. ಆದರೆ ಕೊನೆಯ ಹಂತದಲ್ಲಿ ಅವರ ಮನಸ್ಸಿನಲ್ಲಿ ಏನೋ ಗೊಂದಲ, ಸಂಶಯ ಉಂಟಾಗಿ ತಲುಪಬೇಕಾಗಿದ್ದ ಅಂತಿಮ ರೇಖೆಯ ಒಂದು ಮೀಟರ್ ಮೊದಲೇ ಓಟ ನಿಲ್ಲಿಸಿಬಿಟ್ಟರು. ಇನ್ನೂ ಸ್ವಲ್ಪ ಓಡು ಓಡು' ಎಂಬ ಪ್ರೇಕ್ಷಕರ ಕೂಗೂ ಅವರಿಗೆ ತಿಳಿಯಲಿಲ್ಲ. ಅವರ ಹಿಂದಿನಿಂದ ಓಡಿ ಬರುತ್ತಿದ್ದ ಸ್ಪೇನ್ ಕ್ರೀಡಾಪಟು 24 ವರ್ಷದ ಇವಾನ್ ಫರ್ನಾಂಡಿಸ್ ಅನಯಾ ಇದನ್ನು ಗಮನಿಸಿದರು. ಅಂತಿಮ ರೇಖೆ ಯಾವುದೆಂದು ತಿಳಿಯದೆ ಗೊಂದಲವುಂಟಾಗಿ ನಿಂತಿದ್ದಾರೆಂಬುದು ಇವಾನ್‌ಗೆ ಅರ್ಥವಾಯಿತು. “ಹೇ! ಅಬೆಲ್ ನಿಲ್ಲಬೇಡ ಇನ್ನೂ ಮುಂದೆ ಓಡು' ಎಂದು ಜೋರಾಗಿ ಒದರಿದರು. ಆದರೆ ಅಬೆಲ್‌ಗೆ ಭಾಷೆ ತಿಳಿಯದ್ದರಿಂದ ಅಲ್ಲಿಯೇ ನಿಂತಿದ್ದರು. ಅಷ್ಟಕ್ಕೇ ಸುಮ್ಮನಿರದ ಇವಾನ್ ತನ್ನ ಓಟದ ಜೊತೆಗೆ ಅಬೆಲ್‌ರನ್ನು ರಭಸದಿಂದ ನೂಕಿ ಅಂತಿಮ ರೇಖೆ ದಾಟುವಂತೆ ಮಾಡಿದರು. ನಿರ್ಣಾಯಕರ ತೀರ್ಪು ಬಂದಾಗ ಅಬೆಲ್ ಮೊದಲನೇ ಸ್ಥಾನ ಹಾಗೂ ಇವಾನ್ ಎರಡನೇ ಸ್ಥಾನ ಪಡೆದಿದ್ದರು.

ಪ್ರಥಮ ಸ್ಥಾನ ಪಡೆಯುವ ಅವಕಾಶ ಇದ್ದರೂ ನೀವದನ್ನು ಅಬೆಲ್‌ಗೆ ಏಕೆ ಬಿಟ್ಟುಕೊಟ್ಟಿರಿ ಎಂಬ ಪತ್ರಕರ್ತರ ಪ್ರಶ್ನೆಗೆ ಇಸ್ಲಾನ್ ನೀಡಿದ ಉತ್ತರಮಾರ್ಮಿಕವಾಗಿದೆ “ಮುಂಚಿನಿಂದಲೂ ಎಲ್ಲರಿಗಿಂತ ಮುಂದಿದ್ದ ಅಬೆಲ್‌ರೇ ಅದರ ಹಕ್ಕುದಾರ. ಒಂದು ವೇಳೆ ನಾನು ಈ ಸಂದರ್ಭವನ್ನು ಉಪಯೋಗಿಸಿಕೊಂಡು ಅವರನ್ನು ನಿರ್ಲಕ್ಷಿಸಿ ಸುವರ್ಣ ಪದಕ ಪಡೆದಿದ್ದರೂ ಅದು ನನಗೆ ಹಾಗೂ ನನ್ನ ದೇಶಕ್ಕೆ ಶೋಭೆ ತರುತ್ತಿರಲಿಲ್ಲ. ಬೇರೆಯವರ ದುರ್ಬಲತೆ ಅಥವಾ ಅಜ್ಞಾನವನ್ನು ದುರುಪಯೋಗ ಪಡಿಸಿಕೊಂಡು ಗೆದ್ದು ಬೀಗುವುದಕ್ಕಿಂತ ಅಂಥವರಿಗೆ ಸಹಾಯ ಮಾಡಿ ಆನಂದಿಸುವುದೇ ನಿಜವಾದ ಕ್ರೀಡಾಪಟುವಿನ ಲಕ್ಷಣ ಎಂದು ನನ್ನ ತಾಯಿ ನನಗೆ ತಿಳಿಸಿದ್ದಾಳೆ. ಈಗ ನನಗೆ ಚಿನ್ನದ ಪದಕ ಪಡೆದುದಕ್ಕಿಂತಲೂ ಹೆಚ್ಚಿನ ಆನಂದವಾಗಿದೆ'. ಇವಾನ್‌ಗೆ ಬಂಗಾರದ ಪದಕ ಸಿಕ್ಕಿರಲಿಕ್ಕಿಲ್ಲ, ಆದರೆ ಬಂಗಾರದಂಥ ವ್ಯಕ್ತಿಯಾಗಿ

ಹೊರಹೊಮ್ಮಿದರು. 'ಪರಸ್ಪರಂ ಭಾವಯಂತಃ ಶ್ರೇಯಃ ಪರಮ ವಾಪೃಥ' -

“ಬೇರೆಯವರಿಗೆ ಶ್ರೇಯಸ್ಸನ್ನು ಕೋರುತ್ತಾ ನೀವೂ ಪರಮಶ್ರೇಯಸ್ಸನ್ನು ಪಡೆಯಿರಿ'

ಎನ್ನುತ್ತದೆ ಗೀತೆ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಗುರಿ ಮುಟ್ಟುವದಕ್ಕಿಂತಲೂ

ಅದನ್ನು ತಲುಪುವ ಬಗೆ ಹೇಗಿರಬೇಕೆಂಬುದನ್ನು ತಿಳಿಸುವ ಇಂಥ ಘಟನೆಗಳು

ವಿರಳವಾದರೂ ಮಿನುಗುವ ದೀಪಗಳಾಗಿವೆ.

Comments

Popular posts from this blog

(ಹೆಳವರು/Narrators)

26.8.2025

ಏನನ್ನೂ ಮಾಡದಿರುವುದು